Breaking
13 May 2026, Wed

ಮೊಂಟೆಪದವು ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ : ಬಿಹಾರ ಮೂಲದ ಆರೋಪಿ ಬಂಧನ

ಕೊಣಾಜೆ: ಎರಡು ತಿಂಗಳ ಹಿಂದೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಕಾರ್ಮಿಕನನ್ನು ಕೊಣಾಜೆ ಪೊಲೀಸರು ಹೊರರಾಜ್ಯದಿಂದ ವಶಕ್ಕೆ ಪಡೆದು ಬಂಧಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯನ್ನು ಸಕಲೇಶಪುರ ಮೂಲದ ಸುಂದರಿ (36) ಎಂದು ಗುರುತಿಸಲಾಗಿದೆ.

ಸುಂದರಿಯವರು ಒಂದೂವರೆ ವರ್ಷಗಳಿಂದ ಮೊಂಟೆಪದವು ಸಮೀಪದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಮನೆ ಮನೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದರು. ಅವರ ಜೊತೆ ಇದ್ದ ಮತ್ತೊಬ್ಬ ಮಹಿಳಾ ಸಹಕಾರ್ಮಿಕನು ತನ್ನ ಮದುವೆಯ ನಿಮಿತ್ತ ಒಂದು ತಿಂಗಳ ಹಿಂದೆಯೇ ಊರಿಗೆ ಮರಳಿದ್ದರು.

ಈ ಸಂದರ್ಭವನ್ನು ದುರಪಯೋಗಪಡಿಸಿಕೊಂಡಿದ್ದ ಹತ್ತಿರದ ಮರದ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕನು ಈ ಕೃತ್ಯ ಎಸಗಿದ್ದಾನೆಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿದ ಕೊಣಾಜೆ ಪೊಲೀಸರು, ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕೈಗೊಂಡು, ಇದೀಗ ಹೊರರಾಜ್ಯದಿಂದ ಬಂಧನೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *