ಕೇರಳ: ಯೆಮೆನ್‌ ಪ್ರಜೆಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಮೂಲದ ನರ್ಸ್‌ ಗೆ ಜುಲೈ 16 ರಂದು ಮರಣದಂಡನೆಗೆ ದಿನಾಂಕ ನಿಗದಿಯಾಗಿದೆ.

ತನ್ನ ಪಾಸ್‌ಪೋರ್ಟ್‌ ಕಸಿದುಕೊಂಡಿದ್ದ ಯೆಮೆನ್‌ನ ತಲಾಲ್‌ ಅಬ್ದೊ ಮೆಹದಿಯಿಂದ ಪಾಸ್‌ಪೋರ್ಟ್‌ ಮರಳಿ ಪಡೆಯಲು, ನಿಮಿಷಾ ಪ್ರಿಯಾ ಎಂಬಾಕೆ ಆತನಿಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್‌ ಚುಚ್ಚಿದ್ದಳು. ಆದರೆ ಔಷಧ ಓವರ್‌ಡೋಸ್‌ ಆದ ಕಾರಣ ಆತ ಮೃತಪಟ್ಟಿದ್ದ. ಬಳಿಕ ದೇಶ ತೊರೆಯಲು ಮುಂದಾದ ವೇಳೆಯೇ ನಿಮಿಷಾರನ್ನು ಬಂಧಿಸಲಾಗಿತ್ತು.

ಯೆಮೆನ್‌ ಷರಿಯಾ ಕಾನೂನಿನನ್ವಯ ಹತ್ಯೆಗೀಡಾದ ವ್ಯಕ್ತಿಯ ಕುಟುಂಬ ಒಪ್ಪಿದ್ದಲ್ಲಿ ಭಾರಿ ಪ್ರಮಾಣದ ಪರಿಹಾರ ನೀಡಿದರಷ್ಟೇ ಗಲ್ಲು ಶಿಕ್ಷೆಯಿಂದ ಪಾರಾಗಲು ನಿಮಿಷಾಗೆ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *