ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ) ಬಂಟ್ವಾಳ ಇದರ, ವಗ್ಗ ವಲಯದ ಮಧ್ವ ಒಕ್ಕೂಟದ ವತಿಯಿಂದ ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ಮಧ್ವ ಇಲ್ಲಿ ಗಿಡ ನಾಟಿ ಹಾಗೂ ಪರಿಸರ ಜಾಗ್ರತಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳ ಶೌರ್ಯ ತಂಡ ಕಾಡಬೆಟ್ಟು ವಗ್ಗ ತಂಡದ ಸದಸ್ಯರು ಗಿಡ ನಾಟಿ ಮಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕರಾದ ಭಾಸ್ಕರ್ ಕೃಷಿ ಹಾಗೂ ಪರಿಸರದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ,ಶಾಲಾ ಮುಖ್ಯ ಶಿಕ್ಷಕಿ ಭವಾನಿ , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಿರಾಜ್ , ಪಂಚಾಯತ್ ಸದಸ್ಯರಾದ ಭವಾನಿ , ವಗ್ಗ ವಲಯದ ಮೇಲ್ವಿಚಾರಕರಾಕಿ ಸವಿತಾ, ಮಧ್ವ ಒಕ್ಕೂಟದ ಅಧ್ಯಕ್ಷೆ ಪವಿತ್ರ , ಕಾಡಬೆಟ್ಟು ಶೌರ್ಯ ತಂಡದ ಘಟಕ ಪ್ರತಿನಿಧಿ ಪ್ರವೀಣ್, ಸೇವಾ ಪ್ರತಿನಿಧಿಗಳಾದ ರೇಖಾ ರಜನಿ, ಸುಮಿತ್ರ,ಹಾಗೂ ಮಧ್ಯ ಒಕ್ಕೂಟದ ಪದಾಧಿಕಾರಿಗಳು, ಶಾಲಾ ಶಿಕ್ಷಕಿಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಶೌರ್ಯ ಸದಸ್ಯರಾದ ಮೋಹನಂದ ಸ್ವಾಗತಿ, ಒಕ್ಕೂಟದ ಮಾಜಿ ಅಧ್ಯಕ್ಷರಾದ ಆನಂದ ವಂದಿಸಿ, ವಗ್ಗ ವಲಯ ಮೇಲ್ವಿಚಾರಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.


