ಕಟಪಾಡಿ: ಕಾರೊಂದು ಮಗುಚಿ ಬಿದ್ದು ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ರಾ.ಹೆ. 66ರ ಉದ್ಯಾವರ ಸೇತುವೆ ಬಳಿ ಸೋಮವಾರ(ಜೂ.30) ನಡೆದಿದೆ.

ಕಾರಿನಲ್ಲಿ ಮಹಿಳೆ ಮತ್ತು ಇಬ್ಬರೂ ಮಕ್ಕಳು ಉಡುಪಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

