ಮೂಲ್ಕಿ: ಕಾರೊಂದು ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಸ್ಕೂಟಿ ಮತ್ತು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದಿದ ಘಟನೆ ಪಾವಂಜೆ ದೇವಸ್ಥಾನ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ.

ಗೋಪಾಲ ಆಚಾರ್ಯ ಮತ್ತು ಪುತ್ರಿ ಶ್ರುತಿ ತಮ್ಮ ಸ್ಕೂಟಿಯನ್ನು ನಿಲ್ಲಿಸಿ ರೈನ್ ಕೋಟ್ ಧರಿಸುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಅವರಿಬ್ಬರಿಗೆ ಮತ್ತು ಹತ್ತಿರವೇ ನಿಂತಿದ್ದ ಕೈರುನ್ನಿಸಾ ಎಂಬವರಿಗೆ ಢಿಕ್ಕಿ ಹೊಡೆದಿದೆ.

ಅಪಘಾತಗೊಳ್ಳಗಾದವರು ಗಂಭೀರವಾಗಿ ಗಾಯ ಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಇನ್ನೊಂದು ಕಾರಿನ ಚಾಲಕ ಜನರು ಸೇರಿರುವುದನ್ನು ನೋಡುತ್ತ ಕಾರು ಚಲಾಯಿಸಿದ್ದರಿಂದ ರಸ್ತೆ ಬದಿಯಲ್ಲಿ ನಿಂತಿದ್ದ ಮತ್ತೂಂದು ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದು, ಆ ಸ್ಕೂಟರ್ ಚಾಲಕರಿಗೂ ತರಚಿದ ಗಾಯಗಳಾಗಿವೆ.
ಮಂಗಳೂರು ಉತ್ತರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

