Breaking
20 Jun 2026, Sat

ಪುತ್ರಿಯರಿಂದ ತಾಯಿಗೆ ಜೀವ ಬೆದರಿಕೆ, ಕೆಲಸದಾಕೆಯ ಮೇಲೆ ಹಲ್ಲೆ: ಪ್ರಕರಣ ದಾಖಲು

ಮೂಲ್ಕಿ: ಪುತ್ರಿಯರಿಬ್ಬರು ತಾಯಿಯ ಮೇಲೆ ದ್ವೇಷ ಸಾದಿಸಿ ತಾಯಿಯ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮೇಲೆ ಹಲ್ಲೆ ನಡೆಸಿ ತಾಯಿ ಹಾಗೂ ಕೆಲಸದಾಕೆಗೆ ಜೀವ ಬೆದರಿಕೆ ಹಾಕಿರುವ ಘಟನೆ ಮೂಲ್ಕಿಯಲ್ಲಿ ಬುಧವಾರ ನಡೆದಿದೆ.

ಆರೋಪಿಗಳನ್ನು ಸ್ಯಾಂಡ್ರೆಲ್ಲ ಬಂಗೇರ ಮತ್ತು ಅನಿತಾ ಎಂದು ಗುರುತಿಸಲಾಗಿದೆ.

ಮೂಲ್ಕಿಯ ಮಹಿಳಾ ಕಾಂಗ್ರೆಸ್‌ನ ನಾಯಕಿಯಾಗಿದ್ದ 87 ವರ್ಷದ ವೃದ್ಧೆ ಮನೋರಮಾ ಹೆನ್ರಿ ಹಾಗೂ ಮನೆಗೆಲಸದ ನೀಲಮ್ಮ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.

ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿಯನ್ನು ಹಂಚಿಕೊಟ್ಟ ಅನಂತರ ತನ್ನ ಪಾಲಿನ ಆಸ್ತಿಯಲ್ಲಿ ಜೀವಿಸುತ್ತಿರುವ ಮನೋರಮಾ ಹೆನ್ರಿ ಅವರಿಗೆ ಈ ಹೆಣ್ಣು ಮಕ್ಕಳು ನಿರಂತರ ಕಿರುಕುಳ ನೀಡುತ್ತಿದ್ದು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *