ಅರಂತೋಡು: ಸಂಪಾಜೆ ಗೇಟ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ರಸ್ತೆಯ ಪಕ್ಕದ ಚರಂಡಿಗೆ ಬಿದ್ದ ಘಟನೆ ಇಂದು (ಜೂ.20) ನಡೆದಿದೆ.

ಸಂಪಾಜೆಯಿಂದ ಅರಮನೆ ಕಡೆಗೆ ಕೊಂಡೊಯ್ಯುತ್ತಿದ್ದ ಪಿಕಪ್ ವಾಹನ ಪೆಟ್ರೋಲ್ ಪಂಪ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೇವರಗುಂಡ ಪ್ರಸಾದ್ ಅವರಿಗೆ ಸೇರಿದ ಪಿಕಪ್ ವಾಹನವೆಂದು ತಿಳಿದುಬಂದಿದೆ.



