Breaking
16 Jul 2026, Thu

ಬಂಟ್ವಾಳ: ಗರ್ಭಿಣಿ ಪತ್ನಿ ಹಾಗೂ ಪತಿಯ ಮೃತದೇಹ ಪತ್ತೆ

ಬಂಟ್ವಾಳ: ತುಂಬು ಗರ್ಭಿಣಿಯಾಗಿದ್ದ ಪತ್ನಿ ಮತ್ತು ಪತಿಯ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾದ ಘಟನೆ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಜೂ.19ರಂದು ನಡೆದಿದೆ.

ಮೃತರು ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಅವರ ಪತ್ನಿ ಜಯಂತಿ ಎಂದು ತಿಳಿದುಬಂದಿದೆ.

ಮೃತ ದಂಪತಿ, ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದು ಈವರೆಗೆ ಮಕ್ಕಳಾಗಿರಲಿಲ್ಲ. ಪ್ರಸ್ತುತ ಪತ್ನಿ ಗರ್ಭಿಣಿಯಾಗಿದ್ದು, ಸೀಮಂತದ ದಿನಾಂಕವೂ ನಿಗದಿಯಾಗಿತ್ತು ಎನ್ನಲಾಗಿದೆ.

ಪತಿ ನೇಣು ಬಿಗಿದ ಸ್ಥಿತಿಯಲ್ಲಿದ್ದು, ತುಂಬು ಗರ್ಭಿಣಿಯಾಗಿದ್ದ ಪತ್ನಿಯ ಮೃತದೇಹ ಮಲಗುವ ಕೋಣೆಯ ಬೆಡ್ಡಿನ ಕೆಳಗೆ ಪತ್ತೆಯಾಗಿದ್ದು, ಕುತ್ತಿಗೆ ಭಾಗದಲ್ಲಿ ಗಾಯಗಳಿವೆ ಎನ್ನಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *