Breaking
19 Sep 2026, Sat

ಮಂಗಳೂರು: ಎಕ್ಸ್‌ಪರ್ಟ್‌ನ ನಿಖಿಲ್‌ ಸೊನ್ನದ್‌ ನೀಟ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

ಮಂಗಳೂರು: ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್‌ ಸೊನ್ನದ್‌ ನೀಟ್‌ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 17ನೇ ರ್‍ಯಾಂಕ್‌ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

ವಿಜಾಪುರದ ನ್ಯೂರೋ ಸರ್ಜನ್‌ ಡಾ| ಸಿದ್ದಪ್ಪ ಸೊನ್ನದ್‌ ಹಾಗೂ ವಿಜಯಪುರದ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ| ಮೀನಾಕ್ಷಿ ಅವರ ಪುತ್ರ ನಿಖಿಲ್‌.

ಇವರು ಇತ್ತೀಚೆಗೆ ಪ್ರಕಟವಾದ ಸಿಇಟಿಯ ಕೃಷಿ ವಿಷಯದಲ್ಲಿ 8ನೇ ರ್‍ಯಾಂಕ್‌ ಪಡೆದಿದ್ದರು. ನೀಟ್‌ ಪರೀಕ್ಷೆಯ 720 ಅಂಕಗಳಲ್ಲಿ 670 ಅಂಕಗಳನ್ನು ಪಡೆದಿರುವ ಇವರು, ಹೊಸ ದಿಲ್ಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

“ನೀಟ್‌ನಲ್ಲಿ 100 ರ್‍ಯಾಂಕ್‌ನೊಳಗೆ ಬರುವ ನಿರೀಕ್ಷೆ ಇತ್ತು. 17ನೇ ರ್‍ಯಾಂಕ್‌ ಬಂದಿರುವುದು ತುಂಬ ಖುಷಿ ತಂದಿದೆ. ಪ್ರತಿದಿನ 3 ಗಂಟೆಯ ಅಧ್ಯಯನ, ಸ್ಟಡಿ ಅವರ್‌ನ ಪರಿಪೂರ್ಣ ಬಳಕೆ ಹಾಗೂ ಎನ್‌ಸಿಇಆರ್‌ಟಿಯ ಪಠ್ಯಕ್ರಮದ ಬಳಕೆಯಿಂದ ರ್‍ಯಾಂಕ್‌ ಗಳಿಸಲು ಸಾಧ್ಯವಾಯಿತು’ ಎಂದು ನಿಖಿಲ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *