Breaking
16 Jul 2026, Thu

ಸ್ಕೂಟರ್ ಮೇಲೆ ಬಿದ್ದ ಮರ: ಸಣ್ಣ- ಪುಟ್ಟ ಗಾಯಗಳೊಂದಿಗೆ ದಂಪತಿ ಪಾರು

ಬೆಳ್ತಂಗಡಿ: ತಾಲೂಕಿನ ಕುಕ್ಕಾವು ಕೊಪ್ಪದ ಗಂಡಿ ಸಮೀಪ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದು ದಂಪತಿ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡಿರುವ ವ್ಯಕ್ತಿಗಳನ್ನು ಕಡಿರುದ್ಯವಾರ ಗ್ರಾಮದ ಎರ್ಮಾಲ ಪಲ್ಕೆ ನಿವಾಸಿಗಳಾದ ಗುಮ್ಮಣ್ಣ ಮತ್ತು ವಿಮಲಾ ಎಂದು ಗುರುತಿಸಲಾಗಿದೆ.

ತಾಲೂಕಿನಾದ್ಯಂತ ನಿನ್ನೆಯಿಂದ ಸುರಿದ ಭಾರೀ ಮಳೆಯಿಂದಾಗಿ ಮಣ್ಣು ಸಡಿಲಗೊಂಡಿದ್ದರಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ತಕ್ಷಣ ಸ್ಥಳೀಯರು ಧಾವಿಸಿ ಗಾಯಗೊಂಡಿರುವ ದಂಪತಿಯನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ . ದೊಡ್ಡ ಮರವೇ ಸ್ಕೂಟರ್ ಮೇಲೆ ಬಿದ್ದಿದ್ದು ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *