Breaking
23 Mar 2026, Mon

ಮುಂಡ್ಕೂರಿನಲ್ಲಿ ಗೋಡೆ ಕುಸಿತ: ಮನೆ ಮಂದಿಯ ಸ್ಥಳಾಂತರಕ್ಕೆ ಸೂಚನೆ

ಕಾರ್ಕಳ : ತಾಲೂಕಿನ ಮುಂಡ್ಕೂರಿನಲ್ಲಿ ಭಾರಿ ಮಳೆಯ ಪರಿಣಾಮದಿಂದಾಗಿ ಕಂಪೌಂಡ್ ಕುಸಿದು ಹಾನಿ ಸಂಭವಿಸಿರುವ ಘಟನೆ ಜೂ. 13ರಂದು ನಡೆದಿದೆ.

ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಸಚ್ಚೇರಿಪೇಟೆ ಎಂ ಜಿ ರಸ್ತೆ ನಿವಾಸಿ ಸಫಿಯ ಎಂಬವರ ಮನೆಯ ಗೋಡೆಗೆ ಪಕ್ಕದ ಮನೆಯಲ್ಲಿರುವ ಎಂ.ಎಸ್. ಅಹ್ಮದ್ ರವರ ಕಂಪೌಂಡ್ ಗೋಡೆಯು ಕುಸಿದು ಬಿದ್ದಿದ್ದು ಸುಮಾರು 20000 ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಗೋಡೆ ಕುಸಿತದಿಂದಾಗಿ ಎರಡೂ ಮನೆಯ ಪರಿಸ್ಥಿತಿಯು ಅಪಾಯಕಾರಿಯಾಗಿದ್ದು, ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ತಾಲೂಕು ದಂಡಾಧಿಕಾರಿಯ ಮಾರ್ಗದರ್ಶನದಂತೆ ಎರಡು ಕುಟುಂಬದವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *