ಮಂಗಳೂರು : ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟಿರುವ ಘಟನೆ ನಗರದ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ನಡೆದಿದೆ.
ಮೃತಪಟ್ಟ ವ್ಯಕ್ತಿ ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್(25) ಎಂದು ಗುರುತಿಸಲಾಗಿದೆ.

ನಸುಕಿನ ಜಾವ ಹೃದಯ ಭಾಗದಲ್ಲಿ ನೋವುಂಟಾಗಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿನಯ್ ನಡುಪದವು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಶಬರಿಮಲೆ ಯಾತ್ರೆಗೆ ತೆರಳುವ ಸಂದರ್ಭ ಕಾಲಿಗೆ ಕಲ್ಲು ಚುಚ್ಚಿ, ಸೆಪ್ಟಿಕ್ ಆಗಿ ಬೆರಳನ್ನು ಕತ್ತರಿಸಲಾಗಿತ್ತು. ಈ ಹಿಂದೆ ದಪ್ಪ ಶರೀರವನ್ನು ಹೊಂದಿದ್ದ ವಿನಯ್ ಡಯೆಟಿಂಗ್ ಮೂಲಕ ತೂಕವನ್ನು ಇಳಿಸಿ ಆರೋಗ್ಯದತ್ತ ಗಮನಹರಿಸಿದ್ದರು ಎಂದು ತಿಳಿದು ಬಂದಿದೆ.



