Breaking
22 Mar 2026, Sun

ಪೂಜಾಬಾಗವತ್ ಸ್ನಾತಕೋತ್ತರ ಕೇಂದ್ರದಲ್ಲಿ ಹೃದಯ ಸಂಭಂದಿ ಕಾಯಿಲೆಗಳು ಹಾಗೂ ಹೃದಯದ ಆರೋಗ್ಯದ ಕುರಿತು ಜಾಗೃತಿ ಶಿಬಿರ

ಮೈಸೂರು: ಪಿ ಜಿ ಆರ್ ಎಸ್ ಎಸ್ ಸಂಸ್ಥೆ, ಮೈಸೂರು ಹಾಗೂ ಪೂಜಾಬಾಗವತ್ ಸ್ನಾತಕೋತ್ತರ ಕೇಂದ್ರ ಹಾಗೂ ನಾರಾಯಣ ಆಸ್ಪತ್ರೆ ಇವರ ಜಂಟಿ ಸಹಯೋಗದಲ್ಲಿ ಹೃದಯ ಸಂಬಂದಿಸಿದ ಕಾಯಿಲೆಗಳು ಹಾಗೂ ಹೃದಯದ ಆರೋಗ್ಯದ ಬಗ್ಗೆ ಯುವಕ ಯುವತಿಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪೂಜಾಬಾಗವತ್ ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ಶಿಬಿರವನ್ನು ಸಾರ್ವಜನಿಕಕರಿಗಾಗಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಗಿಡಗಳಿಗೆ ನೀರುಣಿಸುವ ಮುಖಾಂತರ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮವನ್ನು ಶ್ರೀ ಯಾದವ ಹರೀಶ ಹೆಚ್ ಎ, ಸಂಸ್ಥಾಪಕ ರಾಜ್ಯಧ್ಯಕ್ಷರು, ಪಿ ಜಿ ಆರ್ ಎಸ್ ಎಸ್ ಎಸ್ ಸಂಸ್ಥೆ ಇವರು ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ಸದರಿ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳುವಂತೆ ಕೇಳಿಕೊಂಡರು.

ಈ ಕಾರ್ಯಕ್ರಮದಲ್ಲಿ ಶ್ರೀ ವಿ ರವೀಂದ್ರ ಕಾರ್ಯದರ್ಶಿ ಇವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಶ್ರೀ ರಕ್ತದಾನಿ ಮಂಜು ರವರು ರಕ್ತದಾನದ ಬಗ್ಗೆ ಅರಿವನ್ನು ಮೂಡಿಸಿದರು.

ಕಾರ್ಯಕ್ರಮದಲ್ಲಿ ನಾರಾಯಣ ಆಸ್ಪತ್ರೆ ವೈದ್ಯ ಡಾll ಗುಲ್ಜಾರ್ ಹಾಗೂ ಪೂಜಾಬಾಗವತ್ ಸ್ನಾತಕೋತ್ತರ ಕೇಂದ್ರದ ಸಮಾಜಶಾಸ್ತ್ರ ವಿಭಾಗದ ಡಾll ಭಾವನಾ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *