Breaking
19 Sep 2026, Sat

ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಖ್ಯಾತಿಯ ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ಇನ್ನಿಲ್ಲ

ಕುಂದಾಪುರ: ತೆಂಕುತಿಟ್ಟಿನ ಮೇರು ಕಲಾವಿದ ಕೋಡಿ ಕುಷ್ಟ ಗಾಣಿಗ (78) ಅಲ್ಪಕಾಲ ದ ಅಸೌಖ್ಯದಿಂದ ಜೂ.12ರಂದು ನಿಧನರಾಗಿದ್ದಾರೆ.

ಕಟೀಲು ಮೇಳದಲ್ಲಿ 2 ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ ಇವರನ್ನು ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರ, ಶ್ರೀ ದೇವಿ ಮಹಾತ್ಮೆಯ ದೇವಿ ಪಾತ್ರ ಯಕ್ಷಗಾನ ಅಭಿಮಾನಿಗಳು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

ಕೋಡಿ ಕುಷ್ಟ ಗಾಣಿಗರಿಗೆ ಉಡುಪಿ ಕಲಾರಂಗ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಪ್ರಶಸ್ತಿ,ಡಾ.ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಸಂದಿದೆ.

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *