ಮಂಗಳೂರು:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಹತ್ಯೆ ಪ್ರಕರಣದ ತನಿಖೆಯನ್ನು ಇದೀಗ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ (NIA) ಗೆ ವಹಿಸಿದೆ.
ಮೇ 1 ರಂದು ಬಜ್ಪೆಯಲ್ಲಿ ಹತ್ಯೆಯಾಗಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಉಗ್ರವಾದಿ ಸಂಘಟನೆಗಳ ಕೈವಾಡವಿದೆ, ಅಲ್ಲದೆ ಈ ಹತ್ಯೆಯ ಹಿಂದೆ ಸ್ಥಳೀಯ ಅಧಿಕಾರಿಗಳ ಕೈವಾಡ ದ ಬಗ್ಗೆ ಹಿಂದೂ ಸಂಘಟನೆ ಗಳು ಶಂಕೆ ವ್ಯಕ್ತಪಡಿಸಿದ್ದ ವು ಹಾಗಾಗಿ ಈ ಹತ್ಯೆಯ ಕೇಸ್ ಅನ್ನು ಎನ್ ಐ ಎ (NIA) ಗೆ ವಹಿಸಬೇಕೆಂದು ಆಗ್ರಹಿಸಿದ್ದವು, ಈಗ ಸಂಘಟನೆ ಗಳ ಹೋರಾಟಕ್ಕೆ ಜಯ ಸಿಕ್ಕಿದ್ದು ಇದೀಗ ಕೇಂದ್ರ ಗೃಹ ಸಚಿವಾಲಯವು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಗೆ ವಹಿಸಿದೆ.
ಪೊಲೀಸರು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಎನ್ಐಎ ಪ್ರವೇಶದಿಂದ ಪ್ರಕರಣ ಇನ್ನಷ್ಟು ಪ್ರಾಮಾಣಿಕವಾಗಿ ಮತ್ತು ವ್ಯಾಪಕವಾಗಿ ತನಿಖೆಯಾಗಲಿದೆ ಎಂಬ ನಿರೀಕ್ಷೆಯಿದೆ

