Breaking
13 May 2026, Wed

ಹಿಂದೂ ಮುಖಂಡ ಅಜಿತ್ ರೈ ಹೊಸಮನೆಗೆ ಗಡಿಪಾರು ಆದೇಶ: ಹಿಂದೂ ಜಾಗರಣ ವೇದಿಕೆ ಕೆಂಡಮಂಡಲ

ಪುತ್ತೂರು: ಹಿಂದೂ ಯುವ ಮುಖಂಡ ಅಜಿತ್ ರೈ ಹೊಸಮನೆ ಅವರನ್ನು ಗಡಿಪಾರು ಮಾಡುವ ಆದೇಶ ಬಂದಿರುವುದಕ್ಕೆ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಇದೊಂದು ರಾಜಕೀಯ ಪ್ರೇರಿತ ದಬ್ಬಾಳಿಕೆ ಎಂದಿರುವ ಸಂಘಟನೆ ಅಜಿತ್ ರೈ ಹೊಸಮನೆ ಅವರೊಂದಿಗೆ ಪೂರ್ಣ ಹಿಂದೂ ಸಮಾಜ ನಿಂತಿದೆ.ಈ ದಬ್ಬಾಳಿಕೆಗೆ ನಾವು ಬಗ್ಗಲ್ಲ,” ಎಂದು ಪ್ರತಿಕ್ರಿಯೆ ನೀಡಿದೆ.

ಮಾತ್ರವಲ್ಲ ಇದು ಹಿಂದೂ ಧ್ವನಿಯನ್ನು ಮೌನಗೊಳಿಸಲು ನಡೆಸುವ ಹುನ್ನಾರದ ಪ್ರಯತ್ನವಾಗಿದೆ. ಈ ಪರಿಸ್ಥಿತಿಯಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಮತ್ತು ಜನತೆ ಏಕತೆಯಿಂದ ಮುಂದೆ ಬಂದು ನ್ಯಾಯಕ್ಕಾಗಿ ಹೋರಾಡಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *