Breaking
13 May 2026, Wed

ಲಾಯಿಲ: ಅಕ್ರಮ ಮರಳು ಸಾಗಾಟ : ಪಿಕಪ್ ವಾಹನ ವಶಕ್ಕೆ

ಬೆಳ್ತಂಗಡಿ: ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದನ್ನು ಬೆಳ್ತಂಗಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ಠಾಣಾ ಉಪ ನಿರೀಕ್ಷಕರಾದ ಯಲ್ಲಪ್ಪ ಹೆಚ್ ಅವರು ಜೂನ್‌ 2ರಂದು ರೌಂಡ್ಸ್ ನಲ್ಲಿದ್ದಾಗ ಮರಳು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಗಮನಿಸಿದ್ದು, ತನಿಖೆ ನಡೆಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.

ಪೊಲೀಸರು ಮರಳು ಸಹಿತ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *