Breaking
19 Sep 2026, Sat

ಉಜಿರೆ ಅನುಗ್ರಹ ಪೂರ್ವ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಉಜಿರೆ: ಅನುಗ್ರಹ ಪೂರ್ವ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ಪ್ರಾರಂಭೋತ್ಸವವು ಜೂ.3 ರಂದು ಶಾಲಾ ಸಭಾಭವನದಲ್ಲಿ ನಡೆಯಿತು.

ಪ್ರಾರ್ಥನೆ ಮೂಲಕ ಸಭಾ ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಫಾ! ಅಬೆಲ್ ಲೋಬೊ, ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ, ಶಿಕ್ಷಕಿ ಶ್ರೀಮತಿ ಗ್ರೇಸಿ ಸಲ್ಡಾನ ಅವರು ಮಕ್ಕಳ ಜೊತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಸಭಾ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಒಂದನೇ ತರಗತಿ ಮಕ್ಕಳು ಕೆಲವು ಹಾಡುಗಳನ್ನು ಹಾಡಿದರು. ಪ್ರಾಂಶುಪಾಲರ ಪ್ರಸ್ತಾವಿಕ ಮಾತಿನಲ್ಲಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಸ್ವಲ್ಪ ತಮ್ಮ ಜವಾಬ್ದಾರಿಯನ್ನು ನೋಡುವಂತೆ ಕೇಳಿಕೊಂಡರು.

ಅಧ್ಯಕ್ಷತೆಯನ್ನು ವಹಿಸಿದ ಫಾ!. ಅಬೆಲ್ ಲೋಬೊ ಅವರು ಶಾಲಾ ಕಾರ್ಯ ಚಟುವಟಿಕೆಗಳಿಗೆ ಶುಭ ಕೋರಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ವಿನ್ನಿ ಸ್ವಾಗತಿಸಿ, ಗೀತಾ ವಂದಿಸಿದರು ಮಕ್ಕಳಿಗೆ ಸಿಹಿ ತಿಂಡಿಗಳನ್ನು ಹಂಚಲಾಯಿತು.

Leave a Reply

Your email address will not be published. Required fields are marked *