ಚಿಕ್ಕಮಗಳೂರು: ಪಿಕಪ್‌ವೊಂದು ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲೆಯಮಾರುತ ಬಳಿಯ ಜೂನ್.1 ರಂದು ನಡೆದಿದೆ.

ಪಿಕಪ್ ಮಂಗಳೂರು ಕಡೆಗೆ ತರಕಾರಿ ಸಾಗಿಸುತ್ತಿದ್ದು, ಚಾರ್ಮಾಡಿ ಘಾಟಿಯ ಮಲೆಯಮಾರುತ ಬಳಿಯಲ್ಲಿ ಮಂಜು ಹಿಡಿದಿರುವ ಕಾರಣ ರಸ್ತೆಯ ದೃಶ್ಯತೆ ಕಡಿಮೆಯಾಗಿತ್ತು. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿದೆ.

ಅಪಘಾತವಾದ ಕೂಡಲೆ ಸ್ಥಳೀಯರು ಧಾವಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

