Breaking
25 Jul 2026, Sat

ಬಂಟ್ವಾಳದಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ವಿದ್ಯಾರ್ಥಿ ಬಲಿ

ಬಂಟ್ವಾಳ:ವಿದ್ಯಾರ್ಥಿಯೊಬ್ಬ ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟಿನಲ್ಲಿ ಮೇ.30 ರಂದು ನಡೆದಿದೆ.

ಕಿನ್ನಿಬೆಟ್ಟು ನಿವಾಸಿ ಗೋಪಾಲ ಗೌಡ ಅವರ ಪುತ್ರ ಹಿತೇಶ್(17) ಮೃತ ಬಾಲಕನಾಗಿದ್ದಾನೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಹಿತೇಶ್ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.

ಪ್ಲೇಟ್ಲೇಟ್ ಕಡಿಮೆಯಾಗಿತ್ತು ಎನ್ನಲಾಗಿದ್ದು, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *