Breaking
19 Sep 2026, Sat

ಪುತ್ತೂರಿನ ರಕ್ತೇಶ್ವರಿ ವಠಾರದ ಲಿಂಗದಗುಡ್ಡೆಯಲ್ಲಿ ಮನೆಯ ತಡೆಗೋಡೆ ಕುಸಿತ: ಅಪಾಯದ ಅಂಚಿನಲ್ಲಿ ಮೂರು ಮನೆಗಳು

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮನೆಯೊಂದರ ತಡೆಗೋಡೆ ಕುಸಿತಗೊಂಡ ಘಟನೆ ಪುತ್ತೂರಿನ ರಕ್ತೇಶ್ವರಿ ವಠಾರದ ಲಿಂಗದಗುಡ್ಡೆ ಮೇ.30 ರಂದು ನಡೆದಿದೆ.

ಇಲ್ಲಿನ ಲಿಂಗದಗುಡ್ಡೆ ನಿವಾಸಿಯಾಗಿರುವ ಶಶಿಕಾಂತ್ ರಾವ್ ಎಂಬವರಿಗೆ ಸೇರಿದ ಮನೆಯ ತಡೆಗೋಡೆ ಕುಸಿತಗೊಂಡಿದೆ.

ಯಾರೂ ಇಲ್ಲದ ಪರಿಣಾಮ ಬಹುದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಇನ್ನು ತಡೆಗೋಡೆ ಕುಸಿತದ ರಭಸಕ್ಕೆ ಸಮೀಪದಲ್ಲಿರುವ ಮೂರು ಮನೆಗಳು ಅಪಾಯದ ಅಂಚಿನಲ್ಲಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ನಗರಸಭೆಯ ಸದಸ್ಯ ದಿನೇಶ್ ಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *