ಕಡಬ: ಕುದ್ಮಾರು ಅಲಂಕಾರು ಶಾಂತಿಮೊಗರಿನ ರಸ್ತೆಯಲ್ಲಿ ಕಾರು ಮತ್ತು ಮಿನಿ ಟೆಂಪೋ ಢಿಕ್ಕಿ ಹೊಡೆದು ಘಟನೆ ಮೇ 28ರಂದು ನಡೆದಿದೆ.

ಕುದ್ಮಾರು ಕಡೆಗೆ ಬರುತ್ತಿದ್ದ ಕಾರು ಮತ್ತು ಅಲಂಕಾರು ಕಡೆಗೆ ಹೋಗುತ್ತಿದ್ದ ಬೇಕರಿ ಉತ್ಪನ್ನಗಳ ಲೈನ್ ಸೇಲ್‌ನ ಮಿನಿ ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಟೆಂಪೋ ಪಲ್ಟಿಯಾಗಿದೆ.

ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
