ಬಂಟ್ವಾಳ :ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ ಇದರ ವಾರ್ಷಿಕ ಮಹಾಸಭೆಯು ಜೂ 29ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಜಗದೀಶ ಎನ್ ಹಾಗೂ ಪ್ರ. ಕಾರ್ಯದರ್ಶಿಯಾಗಿ ಮಹೇಶ್ ಎನ್ ಸರ್ವಾನುಮತದಿಂದ ಆಯ್ಕೆಯಾದರು.
ಗೌರವಧ್ಯಕ್ಷ ರಾಗಿ ಪಿ ಸುಬ್ರಹ್ಮಣ್ಯ ರಾವ್, ಸಂಚಾಲಕರಾಗಿ ದಾಮೋದರ ಎನ್, ಉಪಾಧ್ಯಕ್ಷರಾಗಿ ಸಂತೋಷ್ ಕುಲಾಲ್ ನೆತ್ತರಕೆರೆ, ಕೋಶಧಿಕಾರಿಯಾಗಿ ರಂಜಿತ್,ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಎನ್, ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್, ಸಲಹೆಗಾರರಾಗಿ, ಸುರೇಶ್ ಭಂಡಾರಿ ಅರ್ಬಿ, ಚಂದ್ರಹಾಸ ಎನ್, ಸದಾನಂದ ಎನ್, ಭಾಸ್ಕರ್ ಕುಲಾಲ್, ಸುರೇಶ್ ಎನ್ ಹಾಗೂ ಕಾರ್ಯಕಾರಿಣಿ ಸಮಿತಿಗೆ ಸದಸ್ಯರನ್ನು ಆಯ್ಕೆಮಾಡಲಾಯಿತು.

