ಬೆಳ್ತಂಗಡಿ: ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ದನವೊಂದು ಸಾವಿಗೀಡಾದ ಘಟನೆ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.

ನಾಲ್ಕೂರು ಗ್ರಾಮದ ನಂಗತ್ಯಾರ್ ನಿವಾಸಿ ಬಳಂಜ ಗ್ರಾ.ಪಂ.ನ ಮಾಜಿ ಅಧ್ಯಕ್ಷ ವಿಕ್ಟರ್ ಕ್ರಾಸ್ತಾ ಅವರ ಮನೆಯ ದನವೊಂದನ್ನು ಮೇಯಲು ತೋಟದಲ್ಲಿ ಕಟ್ಟಿಹಾಕಲಾಗಿತ್ತು. ನಿರಂತರ ಮಳೆಯ ಕಾರಣ ವಿದ್ಯುತ್ ತಂತಿಗೆ ಹಾನಿಯಾಗಿ ತುಂಡಾಗಿ ಬಿದ್ದಿದ್ದು ವಿದ್ಯುತ್ ತಂತಿ ಸ್ಪರ್ಶಿ ಸಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದೆ.

ಮೆಸ್ಕಾಂಗೆ ದೂರು ನೀಡಲಾಗಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಹಾರ ನೀಡುವಂತೆ ಮೆಸ್ಕಾಂಗೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ
