ಮಂಗಳೂರು: ಕಾರು ಸಮೇತ ಫೋಟೊಗ್ರಾಫರ್ ರಾಜ ಕಾಲುವೆಗೆ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿ ಮೇ.28 ರಂದು ಬೆಳಗ್ಗೆ ನಡೆದಿದೆ.
ಫೋಟೊಗ್ರಾಫರ್ ಸೂರ್ಯನಾರಾಯಣ ಮಯ್ಯ (51) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಸೂರ್ಯ ನಾರಾಯಣ ಅವರು ಪಣಂಬೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮದ ಫೋಟೋಗ್ರಫಿ ಗೆಂದು ಬಂದ್ಯೋಡಿನಿಂದ ಬುಧವಾರ ಬೆಳಗ್ಗೆ ಕಾರಿನಲ್ಲಿ ಹೊರಟಿದ್ದರು.
ಕೋಡಿಕಲ್ ಬಳಿಕ ನಿಯಂತ್ರಣ ಕಳೆದುಕೊಂಡ ಅವರ ಕಾರು ತಡೆ ಇಲ್ಲದ ನೀರು ತುಂಬಿದ ರಾಜಕಾಲುವೆಗೆ ಬಿದ್ದಿದೆ.

ಕೂಡಲೇ ಸ್ಥಳೀಯರು ಗಾಯಗೊಂಡ ಸೂರ್ಯನಾರಾಯಣ ಅವರನ್ನು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
