ವಿಜಯಡ್ಕ: ವಂ.ಧ.ನವೀನ್ ಪ್ರಕಾಶ್ ಡಿಸೋಜ ಇವರು ನೂತನ ಸಂತ ಲಾರೆನ್ಸರ ಚರ್ಚಿನಲ್ಲಿ ಧರ್ಮಗುರುಗಳಾಗಿ ಅಧಿಕಾರವನ್ನು ಸ್ವೀಕರಿಸಿದರು.
ಚರ್ಚಿನ ಧರ್ಮಗುರುಗಳಾದ ವಂ.ಧ.ಎಡ್ವಿನ್ ಸಂತೋಷ್ ಮೊನಿಸ್ ಇವರು ಅಧಿಕಾರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಲಯದ ಮುಖ್ಯ ಧರ್ಮಗುರುಗಳಾದ ಅತೀ.ವಂ.ಧ.ಸಿಪ್ರಿಯನ್ ಪಿಂಟೊ ಈ ವಿಧಿ ವಿಧಾನಗಳನ್ನು ನೆರವೇರಿಸಿದರು.
ಚರ್ಚಿನ ಸಮಸ್ತ ಕ್ರೈಸ್ತ ಬಾಂಧವರು ಉಪಸ್ಥಿತಿಯಲ್ಲಿದ್ದು ಈ ವಿಧಿ ವಿಧಾನದಲ್ಲಿ ಪಾಲ್ಗೊಂಡರು.



