ಲೈಂಗಿಕ ಅಪರಾಧಿಗಳ ಪುರುಷತ್ವ ಹರಣಕ್ಕೆ ಸರಕಾರ ಮುಂದಾಗಿದ್ದು, ಇದಕ್ಕಾಗಿ 20 ಜೈಲನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ರೀತಿಯ ಶಿಕ್ಷೆ ಈಗಾಗಲೆ ಜರ್ಮನಿ, ಡೆನ್ಮಾರ್ಕ್ ಸೇರಿ ಇತರ ದೇಶಗಳಲ್ಲಿ ಜಾರಿಯಲ್ಲಿದ್ದು, ಬ್ರಿಟನ್‌ನಲ್ಲೂ ಪ್ರಾಯೋಗಿಕ ಕಾರ್ಯವನ್ನು ಬ್ರಿಟನ್ ಸರಕಾರ ಆರಂಭಿಸಿದೆ.

ಜೈಲುಗಳಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ರಾಸಾಯನಿಕ ಮಾತ್ರೆಗಳನ್ನು ನೀಡುವ ಮೂಲಕ ಅಪರಾಧಿಗಳ ಪುರುಷತ್ವ ಹರಣ ಮಾಡಲಾಗುತ್ತದೆ.

ಆ ಬಳಿಕ ಅವರನ್ನು ಜೈಲಿನಿಂದ ಹೊರ ಬಿಡಲಾಗುತ್ತದೆ. 20 ಜೈಲುಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು ಪ್ರಾಯೋಗಿಕವಾಗಿ ಇಲ್ಲಿ ಪುರುಷತ್ವ ಹರಣವನ್ನು ಪ್ರಾರಂಭಿಸಲಾಗಿದೆ.
ಸದ್ಯ ಬ್ರಿಟನ್‌ನಲ್ಲಿ ಇದು ಕಡ್ಡಾಯವಾಗಲಿದೆ ಎನ್ನಲಾಗಿದೆ.



