Breaking
21 Mar 2026, Sat

ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿಯ ರಸ್ತೆ ಮಧ್ಯೆ ಇರುವ ಗುಂಡಿಗೆ ಬಿದ್ದ ಬೈಕ್

ಸುಳ್ಯ : ಸ್ಕೂಟರ್ವೊಂದು ರಸ್ತೆಯಲ್ಲಿರುವ ಗುಂಡಿಗೆ ಬಿದ್ದು ಪಲ್ಟಿಯಾದ ಘಟನೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿ ಮೇ.23 ರಂದು ನಡೆದಿದೆ.

ರಾತ್ರಿ ಸುರಿಯುತ್ತಿದ್ದ ಮಳೆಯ ಮದ್ಯ ಸ್ಕೂಟರ್ ಸವಾರ ಪ್ರಯಾಣ ಮಾಡುತ್ತಿದ್ದಾಗ ಅಚ್ಚಾನಕ್ಕಾಗಿ ರಸ್ತೆಯಲ್ಲಿನ ಹೊಂಡಕ್ಕೆ ಬಿದ್ದು ಗಾಡಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಇಲ್ಲಿನ ದೇವಸ್ಥಾನ ಬಳಿಯ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು ಮಳೆ ಬಂದ ಕಾರಣ ರಸ್ತೆ ಯಾವುದು..? ಹೊಂಡ ಯಾವುದು ಎಂದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಅದೃಷ್ಟವಶಾತ್ ಸವಾರನಿಗೆ ಯಾವುದೇ ಗಂಭೀರ ಪ್ರಮಾಣದ ಗಾಯಗಳು ಆಗಿಲ್ಲ. ಸದ್ಯದ ಇಲ್ಲಿನ ಪರಿಸ್ಥಿತಿ ಮಾತ್ರವ ಪ್ರಯಾಣಿಕರಿಗೆ ಇದು ತೀವ್ರ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಇಲ್ಲಿನ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸಮಸ್ಯೆಗೆ ಶೀಘ್ರವಾಗಿ ಮುಕ್ತಿ ಕೊಡಿ ಎಂದು ಮಾಧ್ಯಮಗಳ ಮೂಲಕ ಸ್ಥಳೀಯರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *