Breaking
24 Jun 2025, Tue

ಶ್ರೀ ರಕ್ಷೇಶ್ವರಿ ದೇವಿ ಸನ್ನಿಧಿಯಲ್ಲಿ ದೃಢ ಕಲಶಾಭಿಷೇಕ

ಬಿಸಿ ರೋಡ್: ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿಸಿರೋಡಿನಲ್ಲಿ ಶ್ರೀ ದೇವಿಯ ಬ್ರಹ್ಮಕಲಶೋತ್ಸವವು ಲೋಕಾರ್ಪಣೆಗೊಂಡಿದ್ದು, ಶ್ರೀ ರಕೇಶ್ವರೀ ದೇವಿ ಮತ್ತು ಪರಿವಾರ ದೇವರುಗಳಿಗೆ ದೃಢ ಕಲಶಾಭಿಷೇಕವು ಮೇ 26 ರಂದು ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಗಣಹೋಮ ನಡೆಯಲಿದ್ದು, ಬಳಿಕ 10 ಗಂಟೆಗೆ ಅಭಿಷೇಕಗಳು, ದೃಢ ಕಲಶ ಪೂಜೆ, ಪಂಚಗವ್ಯ, ಪಂಚಾಮೃತ ಮತ್ತು ಮಧ್ಯಾಹ್ನ 12-30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ನಡೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಈ ಶುಭ ಸಂದರ್ಭದಲ್ಲಿ ಭಗವದ್ಭಕ್ತ ಬಂಧುಗಳು ಸಕುಟುಂಬಿಕರಾಗಿ ಭಾಗಿಗಳಾಗಿ ತಾಯಿ ಶ್ರೀ ರಕೇಶ್ವರೀ ಮತ್ತು ಪರಿವಾರ ದೇವರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ರಕೇಶ್ವರೀ ದೇವೀ ಸನ್ನಿಧಿ ಸೇವಾ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೋರಿದ್ದಾರೆ.

Leave a Reply

Your email address will not be published. Required fields are marked *