ಹಾಸನ: ಮದುವೆ ಸಮಾರಂಭದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ತನಗೆ ಮದುವೆಯೇ ಬೇಡ ಎಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಘಟನೆ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಮೇ23ರಂದು ನಡೆದಿದೆ.

ಹಾಸನ ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಯುವತಿಯ ಮದುವೆ ಆಲೂರು ನಿವಾಸಿ ಯುವಕನೊಂದಿಗೆ ಇಂದು ನಿಶ್ಚಯವಾಗಿದ್ದು, ತಾಳಿ ಕಟ್ಟುವ ಘಳಿಗೆ ಸಮೀಪಿಸುತ್ತಿದ್ದಂತೆ ಯುವತಿಗೆ ಫೋನ್ ಕರೆ ಬಂದಿದ್ದು ಬಳಿಕ ಯುವತಿ ‘ನನಗೆ ಈ ಮದುವೆ ಬೇಡ’ ಎಂದು ರೂಮಿಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ.
ವರ ಕೂಡ ನನಗೂ ಈ ಮದುವೆ ಬೇಡ ಎಂದಿದ್ದಾನೆ. ಘಟನೆಯಿಂದ ಮದುವೆಗೆ ಆಗಮಿಸಿದ್ದ ಬಂಧು ಮಿತ್ರರು ಗೊಂದಲಕ್ಕೆ ಈಡಾಗಿದ್ದಾರೆ.
ಪ್ರೇಮ ಪ್ರಕರಣ ಇದಕ್ಕೆ ಕಾರಣ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

