Breaking
20 Sep 2026, Sun

ಮಳೆ ಅವಾಂತರ: ಆಂಬ್ಯುಲೆನ್ಸ್ ಗೆ ಕಾರು ಡಿಕ್ಕಿ: ಚಿಕಿತ್ಸೆಗೆ ತೆರಳುತ್ತಿದ್ದ ಓರ್ವ ಮಹಿಳೆ ಸಾವು!

ಕಾಸರಗೋಡು: ಭಾರೀ ಮಳೆಯಿಂದ ಕಾಸರಗೋಡಿನಲ್ಲಿ ಸರಣಿ ಅಪಘಾತ ನಡೆದು ಓರ್ವ ಮಹಿಳೆ ಸಾವನ್ನಪ್ಪಿ 7 ಮಂದಿ ಗಾಯಗೊಂಡ ಘಟನೆ ಮೇ.20ರಂದು ಉಪ್ಪಳ ಗೇಟ್ ಸಮೀಪ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಶಾಹೀನಾ (48) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಆಂಬ್ಯುಲೆನ್ಸ್ ನಲ್ಲಿ ಕಣ್ಣೂರಿನ ಆಸ್ಪತ್ರೆಯಿಂದ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ರಸ್ತೆಯಲ್ಲಿ ಭಾರೀ ಮಳೆಯಿಂದ ನೀರು ತುಂಬಿತ್ತು. ಇದನ್ನ ಕಂಡ ಕೂಡಲೆ ಆಂಬ್ಯುಲೆನ್ಸ್ ಚಾಲಕ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬಂದ ಕಾರು ಆಂಬ್ಯುಲೆನ್ಸ್ ಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಮಗುಚಿ ಬಿತ್ತು ಎಂದು ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ಕಾರಿನ ಹಿಂದಿದ್ದ 5 ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮೃತ ಶಾಹೀನಾ ಅವರ ಪುತ್ರಿ ರಿಯಾ ಫಾತಿಮಾ (9), ಸಹೋದರಿ ಶಜಿನಾ (45), ಸಂಬಂಧಿಕ ಆಸೀಫ್ (22), ಅಂಬ್ಯುಲೆನ್ಸ್ ಚಾಲಕ ಅಕ್ರಂ (38) ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *