Breaking
20 Sep 2026, Sun

ಧರ್ಮಸ್ಥಳ : ಪಂಜಾಬ್‌ ನಲ್ಲಿ ಮೃತಳಾದ ಆಕಾಂಕ್ಷ ಮೃತದೇಹ ಮನೆಗೆ ಆಗಮನ

ಬೆಳ್ತಂಗಡಿ: ಪಂಜಾಬ್ನಲ್ಲಿ ಮೃತಳಾದ ಧರ್ಮಸ್ಥಳ ಬೊಳಿಯಾರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿಗಳ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಆಕಾಂಕ್ಷ ಎಸ್ ನಾಯರ್(22) ಮೃತದೇಹ ಇಂದು ಹುಟ್ಟೂರಿಗೆ ಆಗಮಿಸಿದೆ.

ಮೇ 17ರಂದು ಪಂಜಾಬ್ನ್ ಕಾಲೇಜಿನಲ್ಲಿ ಆಕಾಂಕ್ಷ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಧರ್ಮಸ್ಥಳದ ಬೊಳಿಯರ್ ಗೆ ತೆಗೆದುಕೊಂಡು ಬಂದಿದ್ದಾರೆ.

ಮಗಳ ಮೃತದೇಹ ಕಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಅಂತಿಮ ವಿಧಿ ವಿಧಾನ ಮುಗಿಸಿ 11ಗಂಟೆಗೆ ಬೋಳಿಯಾರಿನ ಮನೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *