Breaking
22 Mar 2026, Sun

ಬುರ್ಖಾಧಾರಿ ಮಹಿಳೆಯರಿಂದ ಮಗುವಿನ ಕಳ್ಳತನಕ್ಕೆ ಯತ್ನ

ಉಡುಪಿ: ಬುರ್ಖಾಧಾರಿ ಮಹಿಳೆಯರು ಕೋಣೆಯಲ್ಲಿ ಮಲಗಿದ್ದ ಮಗುವನ್ನು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ಜನತಾ ಕಾಲೋನಿ ಎಂಬಲ್ಲಿ ನಡೆದಿದೆ.

ಇಲ್ಲಿನ ಮೊಹಮ್ಮದಾಲಿ ಎಂಬವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ನಮಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅದರಲ್ಲಿ ಇನ್ನೊಬ್ಬಳು ಮಹಿಳೆ ಮನೆಯ ಒಳಗೆ ಹೋಗಿ ತೊಟ್ಟಿಲಲ್ಲಿ ಮಲಗಿದ್ದ ಮುಹಮ್ಮದಾಲಿಯ ತಮ್ಮನ ಮಗುವನ್ನು ಎತ್ತಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಗ ಮನೆಯಲ್ಲಿದ್ದ ತಾಬೂರಿಸ್ ಎಂಬವರು ತಡೆದಾಗ ಆಕೆಯನ್ನು ದೂಡಿ, ಮಗುವನ್ನು ನೆಲದಲ್ಲಿ ಬಿಟ್ಟು ಇಬ್ಬರು ಪರಾರಿಯಾದರೆಂದು ತಿಳಿದು ಬಂದಿದೆ.

ಘಟನೆಯಲ್ಲಿ ತಾಬೂರಿಸ್ ಅವರಿಗೆ ಸಣ್ಣಪುಟ್ಟ ಪ್ರಮಾಣದ ಗಾಯಗಳಾಗಿವೆ.

ಈ ಬಗ್ಗೆ ಮಗುವಿನ ತಾಯಿ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *