ನವದೆಹಲಿ: ಪಾಕ್ ಗೆ ಬೆನ್ನೆಲುಬಾಗಿ ನಿಂತು ಮಿತ್ರದ್ರೋಹ ಮಾಡಿದ ಟರ್ಕಿ ವಿರುದ್ಧ ಭಾರತ ಬಾಯ್ಕಟ್ ಟರ್ಕಿ ಅಭಿಯಾನ ಶುರು ಮಾಡಿದೆ.
ಈ ಅಭಿಯಾನಕ್ಕೆ ಮತ್ತಷ್ಟು ಬಲ ಬಂದಿದ್ದು ಟರ್ಕಿಯ ಟೂರಿಸಂ ಗೆ ದೊಡ್ಡ ಹೊಡೆತ ಬೀಳುವ ಮುನ್ಸೂಚನೆ ದೊರೆತಿದೆ.ಅದರ ಮೊದಲ ಭಾಗವಾಗಿ ಭಾರತದಿಂದ ಟರ್ಕಿಗೆ ಹೋಗುವ 15 ಸಾವಿರಕ್ಕೂ ಹೆಚ್ಚು ಫ್ಲೈಟ್ ಬುಕ್ಕಿಂಗ್ ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉತ್ತರ ಪ್ರದೇಶದ ಹಲವು ನಗರಗಳಿಂದ ಟರ್ಕಿ ಹಾಗೂ ಅಜರ್ ಬೈಜಾನ್ ದೇಶಗಳ ಪ್ರವಾಸವನ್ನು ಸ್ವಯಂಪ್ರೇರಿತರಾಗಿ ರದ್ದು ಮಾಡಿಕೊಳ್ಳುತ್ತಿದ್ದು ಆಪರೇಷನ್ ಸಿಂಧೂರ್ ವೇಳೆ ಭಾರತೀಯರು ಅಪ್ರತಿಮ ದೇಶಪ್ರೇಮ ಮೆರೆದಿದ್ದಾರೆ. ಟರ್ಕಿ ಪಾಕ್ ಗೆ ಬೆಂಬಲ ವಾಗಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಟರ್ಕಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಹಿಷ್ಕಾರ ಮಾಡಿದ್ದಾರೆ ಎಂದು ಟ್ರಾವೆಲಿಂಗ್ ಒಕ್ಕೂಟ ಸ್ಪಷ್ಟಪಡಿಸಿದೆ.

