Breaking
22 Mar 2026, Sun

ನೆರಿಯಾದಲ್ಲಿ”ಮಕ್ಕಳ ಚಿತ್ತ ‘ಮಲೆ’ನಾಡಿನ ವೈಭವದತ್ತ” ಮತ್ತು ಬುಡಕಟ್ಟು ಅಧ್ಯಯನ ಶಿಬಿರ’ ಕಾರ್ಯಕ್ರಮ

ಬೆಳ್ತಂಗಡಿ : ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳ ಗಂಗೋತ್ರಿ ಕೋಣಾಜೆ ಪ್ರಥಮ ವರ್ಷದ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದಲ್ಲಿ ಮೇ.6ರಿಂದ 12ರವರೆಗೆ “ಮಕ್ಕಳ ಚಿತ್ತ ‘ಮಲೆ’ನಾಡಿನ ವೈಭವದತ್ತ” ಎಂಬ ಪರಿಕಲ್ಪನೆಯೊಂದಿಗೆ ‘ಬುಡಕಟ್ಟು ಅಧ್ಯಯನ ಶಿಬಿರ’ವು ನಡೆಯಿತು.

ಒಟ್ಟು ಏಳು ದಿನಗಳಲ್ಲಿ ಮಲೆಕುಡಿ ಸಮುದಾಯದ ಬುಡಕಟ್ಟು ವಿಚಾರಗಳ ಮೂಲ ಅಧ್ಯಯನ ಮಲೆಕುಡಿಯರ ಮಲೆ ಚಾಮುಂಡೇಶ್ವರಿ ದೇವಸ್ಥಾನ ಜಾತ್ರೆ ವೀಕ್ಷಣೆ , ಸಮುದಾಯದ ಕೆಲವು ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕ, ಜಾಗೃತಿ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಮತ್ತು ಮಲೆಕುಡಿಯ ಸಮುದಾಯದವರಿಗೆ ಉಚಿತ ವೈದ್ಯಕೀಯ ತಪಾಸಣೆ ಇತ್ಯಾದಿ ಸಮುದಾಯಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮೇ.7ರ ಗೋಷ್ಠಿಯಲ್ಲಿ ಕೊನೆ ದಿನವಾದ ಮೇ.12ರಂದು ಸಮಾರೋಪ ಪೂರ್ವದ ಗೋಷ್ಠಿಯಲ್ಲಿ ಬೆಳ್ತಂಗಡಿಯ ಪತ್ರಕರ್ತ ಅಚುಶ್ರೀ ಬಾಂಗೇರು ಸಂಪನ್ಮೂಲ ವ್ಯಕ್ತಿಯಾಗಿಪ್ರಸ್ತುತ ಸಮಾಜದಲ್ಲಿ ಪತ್ರಿಕೆಗಳ ಪಾತ್ರ” ಎಂಬ ವಿಷಯ ಮಂಡನೆಗೈದರು.

ಮೇ.12ರ ಸಂಜೆ ನಡೆದ ಶಿಬಿರದ ಅಂತಿಮ ಘಟ್ಟವಾದ ಸಮಾರೋಪ ಸಮಾರಂಭವು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಡಾ. ಪೌಲ್ ಜಿ ಅಕ್ವೀನಾಸ್
ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಲೆಕುಡಿಯ ಸಮುದಾಯದ ಹಿರಿಯರಾದ ಮಂಜಪ್ಪ ಮಲೆಕುಡಿಯ, ಸ. ಹಿ. ಪ್ರಾ. ಶಾಲೆ ನೆರಿಯಾ ಇದರ ಎಸ್. ಡಿ.ಎಂ.ಸಿ ಅಧ್ಯಕ್ಷ ಸತೀಶ್ ಭರ್ತಾಜ್ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ನವೀನ್ ನೆರಿಯ ಭಾರತ ಮಾತಾ ಪೂಜೆಯನ್ನು ನೆರವೇರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷಮದನ್ ಕುಮಾರ್ ಕೆ., ಸಾಂಸ್ಕೃತಿಕ ರಾಮಪ್ರಸಾದ್ ಬಿ.ಟಿ., ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಶಿಬಿರದ ಸಂಯೋಜಕಿ ವಿನುತಾ ಕೆ. ಸ್ವಾಗತಿಸಿದರು,ವಿದ್ಯಾರ್ಥಿ ಪ್ರತಿನಿಧಿ ಆರ್ ಸೂರ್ಯ ಶಿಬಿರದ ವರದಿ ವಾಚನಗೈದರು, ವಿದ್ಯಾರ್ಥಿ ಪ್ರತಿನಿಧಿ ಆಸಿಕಾ ಬಿ. ಅತಿಥಿಗಳಿಗೆ ಸ್ಮರಣಿಕೆ ಹಸ್ತಾಂತರಿಸಿದರು.
ಮೋಕ್ಷಾ ಬಿ, ಶ್ರೇಯಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಶಿಬಿರ ನಿರ್ದೇಶಕಿ ಡಾ. ಯಶಸ್ವಿನಿ ಬಟ್ಟಂಗಾಯ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *