Breaking
22 Jun 2025, Sun

ಮಾತು ಬಾರದ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ: ಬೆನ್ನು ಮೂಳೆ ಮುರಿದು, ಕತ್ತು ತಿರುಚಿ ಹತ್ಯೆ!

ರಾಮನಗರ: ಬಿಡದಿಯಲ್ಲಿ 14 ವರ್ಷದ ಹೆಣ್ಣುಮಗಳ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

14 ವರ್ಷದ ಖುಷಿಗೆ ಮಾತು ಬರಲ್ಲ , ಕಿವಿಯೂ ಕೇಳಲ್ಲ. ಈಕೆ ಬಡವರ ಮನೆಯ ಅಕ್ಕಿಪಿಕ್ಕಿ ಜನಾಂಗದ ಹುಡುಗಿ ಎನ್ನಲಾಗಿದೆ. ನಾಲ್ಕು ಜನ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಆಕೆಯ ಬೆನ್ನು ಮೂಳೆ ಮುರಿದು, ಕತ್ತು ತಿರುಚಿ ಹತ್ಯೆ ಮಾಡಿದ್ದಾರೆ. ಬಳಿಕ ಶವವನ್ನು ರೈಲ್ವೆ ಟ್ರ್ಯಾಕ್ ಬಳಿ ಬಿಸಾಡಿ ಎಸ್ಕೇಪ್ ಆಗಿದ್ದಾರೆ.

ಈ ಬಗ್ಗೆ ಯಾವೊಂದು ದೃಶ್ಯ ಮಾಧ್ಯಮಗಳೂ ಇದುವರೆಗೂ ಸುದ್ದಿ ಪ್ರಸಾರ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಖುಷಿಗಾದ ಅನ್ಯಾಯದ ಬಗ್ಗೆ ದಯವಿಟ್ಟು ಎಲ್ಲರೂ ಗಟ್ಟಿಧ್ವನಿಯಿಂದ ಸರ್ಕಾರವನ್ನು ಪ್ರಶ್ನಿಸಿ ಈ ಹೆಣ್ಣುಮಗಳ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.

Leave a Reply

Your email address will not be published. Required fields are marked *