ಉಡುಪಿ : ವಿದ್ಯಾರ್ಥಿನಿಯೊಬ್ಬಳು ಗೋಡೆಯ ಮೇಲೆ ‘ಹಿಂದೂಸ್ತಾನ್ ನಹಿ ಮುಸ್ಲಿಂಸ್ತಾನ್’ ಎಂದು ದೇಶ ವಿರೋಧಿ ಬರಹವೊಂದು ಬರೆದಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಲೇಡಿಸ್ ಹಾಸ್ಟೆಲ್ನ ಶೌಚಾಲಯದ ಗೋಡೆಯಲ್ಲಿ ಹಿಂದೂ ಧರ್ಮಕ್ಕೆ ಅವಹೇಳನವಾಗುವ ಹಾಗೆ ವಿದ್ಯಾರ್ಥಿನಿ ಬರೆದಿದ್ದಾಳೆ.ನಿಟ್ಟೆ ಕಾಲೇಜ್ನ ಮೈನ್ ಲೇಡಿಸ್ ಹಾಸ್ಟೇಲ್ನ ಮ್ಯಾನೇಜರ್ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉಡುಪಿ ಎಸ್ಪಿ ಅರುಣ್ ಕುಮಾರ್ ಮಾತನಾಡಿದ್ದು ಹಿಂದೂಸ್ತಾನ್ ನಹಿ ಮುಸ್ಲಿಂಸ್ತಾನ್ ಬೋಲ್, ಮುಸ್ಲಿಂ ಜಿಂದಾಬಾದ್ ಹಿಂದೂ ಫ* ಆಫ್ ಎಂದು ಬರೆದಿರುವ ಯುವತಿ ಎಸ್ಕೇಪ್ ಆಗಿದ್ದಾಳೆ.
ಎರಡು ಸಮುದಾಯಗಳ ನಡುವೆ ದ್ವೇಷ ಹಬ್ಬುವ ರೀತಿಯಲ್ಲಿ ಲೇಡಿಸ್ ಹಾಸ್ಟೇಲಿನ ಶೌಚಾಲಯದ ಗೋಡೆಗಳಲ್ಲಿ ಬರೆದಿರುವ ಬರಹದ ಬಗ್ಗೆ ಕ್ರಮ ವಹಿಸಲಾಗಿದೆ.

ಪ್ರಚೋದನಕಾರಿಯಾಗಿರುವ ಬರಹದ ಬಗ್ಗೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


