ಬಂಟ್ವಾಳ: ಮಂಗಳೂರು ನಗರದ ಬಜ್ಪೆಯಲ್ಲಿ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಭಜರಂಗದಳದ ರಾಷ್ಟ್ರೀಯ ಸಂಯೋಜಕರಾದ ನೀರಜ್ ಧೋನೆರಿಯಾ ಇಂದು ಭೇಟಿ ನೀಡಿದರು.

ಬಳಿಕ ತಂದೆ,ತಾಯಿ ಮತ್ತು ಮನೆಯ ಸದಸ್ಯರ ಜೊತೆ ಮಾತನಾಡಿ ಧೈರ್ಯ ತುಂಬಿದರು.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ತು ಕ್ಷೇತ್ರಿಯ ಪ್ರಮುಖರಾದ ಸೂರ್ಯನಾರಾಯಣ ಜೀ, ಭಜರಂಗದಳ ಪ್ರಾಂತ ಸಂಯೋಜಕರಾದ ಪ್ರಭಂಜನ್ ಸೂರ್ಯ, ಸಹ ಸಂಯೋಜಕರಾದ ಗೋವರ್ಧನ್, ಮಂಗಳೂರು ವಿಭಾಗ ಭಜರಂಗದಳ ಸಂಯೋಜಕರಾದ ಪುನೀತ್ ಅತ್ತಾವರ ಭಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕರಾದ ಭರತ್ ಕುಮ್ಡೇಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

