ಬಂಟ್ವಾಳ: ಬಿ.ಸಿ.ರೋಡಿನ ಗೂಡಿನಬಳಿಯ ನೇತ್ರಾವತಿ ನದಿಯಲ್ಲಿ ಎ.30 ರ ಸಂಜೆ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿ 40 ರಿಂದ 45 ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ. ಈ ವ್ಯಕ್ತಿ ಮೃತಪಟ್ಟು ಒಂದೆರಡು ದಿನಗಳಾಗಿರುವ ಸಾಧ್ಯತೆ ಇದ್ದಿರಬಹುದೆಂದು ಪೋಲಿಸರು ತಿಳಿಸಿದ್ದಾರೆ.

ಯಾವುದಾದರೂ ವ್ಯಕ್ತಿ ಕಾಣೆಯಾಗಿ ಪತ್ತೆಯಾಗದೇ ಇದ್ದರೆ ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮೃತದೇಹದ ಪತ್ತೆಗೆ ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ.


