Breaking
19 Sep 2026, Sat

ಜೀನಿ ಕಂಪನಿಯ ಮಾಲಕ ದಿಲೀಪ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ತುಮಕೂರು: ಶಿರಾ ತಾಲೂಕಿನ ಯರಗುಂಟೆ ಬಳಿ ಇರುವ ಜೀನಿ ಕಂಪನಿಯ ಮಾಲಕ ದಿಲೀಪ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಕಳೆದ ಆರು ತಿಂಗಳಿಂದ ಮಾಲಕ ದಿಲೀಪ್ ಕುಮಾರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಅವರದ್ದೇ ಕಂಪೆನಿಯ ಕೆಲಸ ಮಾಡುತ್ತಿದ್ದ ಮೇಘನಾ ಎಂಬುವವರು ದೂರು ನೀಡಿದ ಮಹಿಳೆಯಾಗಿದ್ದಾರೆ.

ತಾವೂ ನೀಡಿದ ದೂರಿನಲ್ಲಿ ಕಳೆದ ಹತ್ತು ತಿಂಗಳ ಹಿಂದೆ ನಾನು ಕೆಲಸಕ್ಕೆ ಸೇರಿದ್ದೆ, ಕಳೆದ 15 ದಿನಗಳಿಂದ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿ, ನನ್ನನ್ನು ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ಇವರು ಕಂಪನಿಯಲ್ಲಿ ಕೆಲಸಕ್ಕೆ ಬರುವ ಅನೇಕ ಯುವತಿಯರ ಮೇಲೂ ಈ ರೀತಿ ಕೃತ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೆ ಬೇಡಿಕೊಂಡರು ಬಿಡದೆ ಅತ್ಯಾಚಾರಕ್ಕೆ ಯತ್ನಿಸುತ್ತಾರೆ. ಒಂದು ವೇಳೆ ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Leave a Reply

Your email address will not be published. Required fields are marked *