Breaking
23 Mar 2026, Mon

ರೈತರ ನೀರಾವರಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಅಭಿವೃದ್ದಿ ಶುಲ್ಕ ಕೈ ಬಿಡುವಂತೆ ಪ್ರಭಾಕರ ಪ್ರಭು ಮನವಿ

ಬಂಟ್ವಾಳ: ರೈತರು ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಸಂಬಂಧಿತ ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ನೀರಾವರಿ ಪಂಪ್ ಸೆಟ್ಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯುವರೇ “ ಶೀಘ್ರ ವಿದ್ಯುತ್ ಸಂಪರ್ಕ ಯೋಜನೆ “ಯಡಿಯಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಅರ್ಜಿ ಸಲ್ಲಿಸುವಾಗಲೇ ಠೇವಣಿಯೊಂದಿಗೆ ಅಭಿವೃದ್ದಿ ಶುಲ್ಕ ಹೆಸರಿನಲ್ಲಿ ರೂ.15,000/- ಹೆಚ್ಚುವರಿಯಾಗಿ ಪಾವತಿಸಲು ಸರಕಾರದ ಇಂಧನ ಇಲಾಖಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದರಿಂದ

ರಾಜ್ಯದ ಕೃಷಿಕ ಕುಟುಂಬಗಳಿಗೆ ಮತ್ತು ರೈತರಿಗೆ ತುಂಬಾ ಹೊರೆಯಾಗಿದ್ದು , ರೈತರು ಸರಕಾರದ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ರಾಜ್ಯಾದಾದ್ಯಂತ ಲಕ್ಷಾಂತರ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿ ಕೆಲಸ ಆದೇಶವಾಗಿದ್ದುಕೊಂಡು ವಿದ್ಯುತ್ ಸಂಪರ್ಕ ಪಡೆಯುವ ಈ ಸಂದರ್ಭದಲ್ಲಿ ಇಂತಹ ಆದೇಶಗಳು ರೈತರಲ್ಲಿ ದಿಗ್ಬ್ರಮೆ ಹುಟ್ಟಿಸಿದೆ.

ಸರಕಾರದ ಅಸಂಬದ್ದ ಆದೇಶದಿಂದ ರೈತರಿಗೆ ಗೊಂದಲ

ಸರಕಾರದ ಈ ಆದೇಶದಂತೆ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳಿಸುವ ಸಂಬಂಧ ಆದೇಶವಾಗಿರುವುದು 15-04-2025ರಲ್ಲಿ ಆದರೆ ಈ ಆದೇಶ ಅನ್ವಯವಾಗುವುದು 22-09-2023 ರ ನಂತರ ನೋಂದಣಿಯಾದ ಎಲ್ಲಾ ರೈತರಿಗೂ ಸಂಬಂಧಪಡುವಂತಾಗಿದ್ದು ,ಅಂದಿನಿಂದ ನೀರಾವರಿ ವಿದ್ಯುತ್ ಸಂಪರ್ಕ ಪಡೆದಿರುವ ರೈತರು ರೂ.15000/- ಅಭಿವೃದ್ದಿ ಶುಲ್ಕ ಭರಿಸಬೇಕಾಗುತ್ತದೆ .

ಇದರಿಂದ ಸರಕಾರವು ಗ್ಯಾರಂಟಿ ಯೋಜನೆಗಳ ಸಂಭ್ರಮಾಚರಣೆಗಾಗಿ ರೈತರಿಂದಲೂ ಹಣ ವಸೂಲಿ ಮಾಡಿ ರೈತರ ಬೆನ್ನೆಲುಬನ್ನು ಮುರಿದಂತೆ ಆಗಿದ್ದು ,ರೈತರಿಗೆ ತುಂಬಾ ಕಷ್ಟವಾಗಿದೆ . ಈ ಎಲ್ಲಾ ರೈತರ ನೀರಾವರಿ ಪಂಪ್ ಸೆಟ್ಟ್ ವಿದ್ಯುತ್ ಸಂಪರ್ಕ ವಿಧಿಸಿದ ಅಭಿವೃದ್ದಿ ಶುಲ್ಕವನ್ನು ತಕ್ಷಣದಿಂದಲೇ ಕೈ ಬಿಟ್ಟು ಪರಿಷ್ಕ್ರತ ಆದೇಶ ಹೊರಡಿಸುವಂತೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಕರ್ನಾಟಕಸರಕಾರದ ಇಂಧನ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *