Breaking
28 Jul 2026, Tue

ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

ಇಂದಬೆಟ್ಟು-ನಾವೂರು: ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜು.26ರಂದು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ದರ್ಣಪ್ಪ ಮೂಲ್ಯ ನಾವೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಸತೀಶ್ ಗೌಡ ಚೌಕದಕಟ್ಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಂತೋಷ್ ಗೌಡ ಕೊಯಮಜಲು, ನಾರಾಯಣ ಗೌಡ ಕುಂಡಡ್ಕ, ಕೊರಗಪ್ಪ ಗೌಡ ಎಟ್ಟಿಬೆಟ್ಟು ಹಾಗೂ ಕೆ. ದೇಜಪ್ಪ ಗೌಡ ಕೆರೆಕೊಡಿ ಕಜೆ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಗೌಡ ನಾಗಾಜೆ ಹಾಗೂ ಕಾರ್ಯದರ್ಶಿಗಳಾಗಿ ಪ್ರಶಾಂತ್ ಉಂಬೆಜೆ, ಸುಂದರ ಎ. ಇಂದಬೆಟ್ಟು ಹಾಗೂ ಹರಿಕಿರಣ್ ಯು. ಪ್ರಭು ಮತ್ತು ಕೋಶಾಧಿಕಾರಿಯಾಗಿ ಸಂತೋಷ್ ಎಂ. ಬೆದ್ರಬೆಟ್ಟು ಆಯ್ಕೆಯಾದರು.

ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚಂದ್ರಶೇಖರ ಕಾಂಜಾನು, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್ ಎಸ್. ಇಂದಬೆಟ್ಟು, ಹಿರಿಯರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ವಸಂತ ಗೌಡ ಕಲ್ಲಾಜೆ, ನಾರಾಯಣ ಟೈಲರ್ ಇಂದಬೆಟ್ಟು, ದರ್ಣಪ್ಪ ಗೌಡ ಬೆದ್ರಬೆಟ್ಟು, ಗಣೇಶ್ ಗೌಡ ನಾವೂರು, ವಿನೋದ್ ಪ್ರಸಾದ್ ಕಲ್ಲಾಜೆ ಹಾಗೂ ಅವಿನಾಶ್ ಸೋಮಯ್ಯದಡ್ಡು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *