Breaking
19 Sep 2026, Sat

47ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಸಮಿತಿ ರಚನೆ: ಅಧ್ಯಕ್ಷರಾಗಿ ಸತೀಶ್ ಭಂಡಾರಿ ಆಯ್ಕೆ

ಬಿ.ಸಿ.ರೋಡ್: ಹಿಂದೂ ಧಾರ್ಮಿಕ ಸೇವಾ ಸಮಿತಿ, ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಸಮಿತಿ ರಚನಾ ಸಭೆಯು ಜುಲೈ 26, 2026ರಂದು ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು.


ಸಭೆಯಲ್ಲಿ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಲತಬೆಟ್ಟು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ, ಭಾಸ್ಕರ ಟೈಲರ್ ಕಾಮಾಜೆ ಹಾಗೂ ಚರಣ್ ಜುಮಾದಿ ಗುಡ್ಡೆ ಆಯ್ಕೆಯಾದರು.


ಕಾರ್ಯದರ್ಶಿಯಾಗಿ ಎಂ. ಸತೀಶ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ರಾಜೇಶ್ ಬಿ. ಮಹಾಕಾಳಿಬೆಟ್ಟು ಮತ್ತು ಪ್ರದೀಪ್ ಕೆ.ಎನ್., ಖಜಾಂಚಿಯಾಗಿ ಎನ್. ಶ್ರೀಧರ್ ಶೆಣೈ, ಜಂಟಿ ಖಜಾಂಚಿಯಾಗಿ ಆಶಾ ಪಿ. ರೈ ಅವರನ್ನು ಆಯ್ಕೆ ಮಾಡಲಾಯಿತು.


ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿರಣ್ ಕುಮಾರ್, ಶ್ರೀಧರ್ ಅಲೆತ್ತೂರು, ನರೇಶ್ ಹೊಳ್ಳ ಕಲ್ಲಿಮಾರ್, ಶರತ್ ಕುಮಾರ್, ಪ್ರಣಾಮ್ ಅಜ್ಜಿಬೆಟ್ಟು, ಗೀತಾ ವೈ. ಶೆಟ್ಟಿ, ಲಕ್ಷಣ್ ರಾಜ್, ಮಾಧವ ಕೈಕುಂಜೆ, ನವೀನ್ ಶೆಟ್ಟಿ ಮಿತ್ತಬೈಲ್, ನಾಗೇಶ್ ಟೈಲರ್, ಭೋಜ ಸಾಲ್ಯಾನ್, ಶೈಲೇಶ್ ಕೈಕುಂಜೆ ಹಾಗೂ ಅಕ್ಷಯ್ ಕಾಮಾಜೆ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *