Breaking
19 Sep 2026, Sat

ಬಸ್‌–ಬೈಕ್‌ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಸಾವು, ಪತ್ನಿಗೆ ಗಂಭೀರ ಗಾಯ

ಬಜಪೆ: ಬಸ್‌ ಹಾಗೂ ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಬಜಪೆ–ಕಟೀಲು ರಾಜ್ಯ ಹೆದ್ದಾರಿ 67ರ ಎಕ್ಕಾರು ಬೋಲೋಡಿ ಬಳಿ ಜುಲೈ 27ರ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಮಹಮ್ಮದ್‌ ಬಶೀರ್‌ (45) ಎಂದು ಗುರುತಿಸಲಾಗಿದೆ. ಮೂಲತಃ ಕಿನ್ನಿಗೋಳಿ ಕಾಪಿಕಾಡು ನಿವಾಸಿಯಾಗಿದ್ದ ಅವರು ಪ್ರಸ್ತುತ ಬಜಪೆ ಪಟ್ಟಣದ ವಸತಿ ಸಮುಚ್ಚಯವೊಂದರಲ್ಲಿ ವಾಸಿಸುತ್ತಿದ್ದರು.

ಕಟೀಲು ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಬಸ್‌ ಹಾಗೂ ಬಜಪೆ ಕಡೆಯಿಂದ ಬರುತ್ತಿದ್ದ ಬೈಕ್‌ ನಡುವೆ ಎಕ್ಕಾರು ಬೋಲೋಡಿ ಬಳಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್‌ ಸವಾರ ಮಹಮ್ಮದ್‌ ಬಶೀರ್‌ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ಪತ್ನಿಯನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *