Breaking
23 Mar 2026, Mon

ಕೆ.ಟಿ. ಕಲ್ಲಡ್ಕದ ಸ್ಪೆಶಾಲಿ “ಟಿ” 70 ವರ್ಷಗಳ ಸವಿರುಚಿ

ಜಯಾನಂದ ಪೆರಾಜೆ

ಕಲ್ಲಡ್ಕ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಕಲ್ಲಡ್ಕ ಪೇಟೆ ಬಂದಾಗ ನೆನಪಾಗುವುದು ಕಲ್ಲಡ್ಕ ಸ್ಪೆಶಲ್ “ಟಿ” ಅದುವೇ ಕೆ.ಟಿ.
ಒಮ್ಮೆ ಸವಿದವರಿಗೆ ಮತ್ತೆ ಮತ್ತೆ ಸವಿಯ ಬೇಕೆಂಬ ಅಭಿರುಚಿ.ಯಾಕೆಂದರೆ ಕಳೆದ‌ ಎಪ್ಪತ್ತು ವರ್ಷಗಳಲ್ಲಿ ಲಕ್ಷ್ಮೀ ನಿವಾಸ ಸ್ಪೆಶಲ್ ಕೆಟಿ ಸವಿದವರು ಲಕ್ಷಾಂತರ ಮಂದಿ .
ವಿದೇಶಿಗರು ಹೊಸ ರುಚಿಯನ್ನು ಸವಿದು ಕೊಂಡಾಡಿದ್ದಾರೆ.
ಸಮಪ್ರಮಾಣದ ಸಕ್ಕರೆ,ಚಾ ಹುಡಿಯ ಡಿಕಾಕ್ಷನ್ ,ದಪ್ಪ ಹಾಲಿನಲ್ಲಿ ಸೇರಿದಾಗ ಟೀ ರೆಡಿ. ಹಾಲಿನ ಮೇಲೆ ತೇಲಾಡುವ ಟಿ ಡಿಕಾಕ್ಷನ್ ನೋಡುವುದೇ ಒಂದು ಆನಂದ. ಸವಿದಾಗ ಪರಮಾನಂದ. ಕುಡಿದವರು ಯಾರೇ ಆಗಲಿ ಈ ಪಾಕಕ್ಕೆ ಜಯ್ ಎನ್ನದವರಿಲ್ಲ.

ಕಲ್ಲಡ್ಕ ಶ್ರೀರಾಮ ಮಂದಿರದ ಪ್ರವೇಶ ದ್ವಾರದಲ್ಲಿಯೇ ಲಕ್ಷ್ಮೀ ಗಣೇಶ ಹೊಟೇಲ್ ಇದೀಗ ಭಾರೀ ಫೇಮಸ್.
ಕಲ್ಲಡ್ಕ ಬಂದವರು ವಾಹನ ನಿಲ್ಲಿಸಿ ಕೆ.ಟಿ.ಹೊಟೇಲ್ಗೆ ಭೇಟಿ ನೀಡುವುದು ಸಂಪ್ರದಾಯವಾಗಿ ಬಿಟ್ಟಿದೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ರಾಜ್ಯದಲ್ಲಿಯೇ ವಿಶಿಷ್ಟವಾದ ಓವರ್ ಬ್ರಿಡ್ಜ್ ನಿರ್ಮಾಣವಾಗುತ್ತಿದ್ದು ಇನ್ನೂ ಕೆಲವೇ ದಿನಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಕೆಳಗಡೆ ದಶಕಗಳ ಇತಿಹಾಸವಿರುವ ಕಪ್ಪುಬಿಳಿ ಚಾ ” ಕೆ.ಟಿ ” ನೀವೊಮ್ಮೆ ಸವಿಯಲೇ ಬೇಕು.ಬೇಕಾದರೆ ರಿಂ ಜಿಂ ಕಾಫಿಯೂ ಇದೆ.

Leave a Reply

Your email address will not be published. Required fields are marked *