ಬೆಳ್ತಂಗಡಿ ತಾಲೂಕಿನ ನೆಟ್ ವರ್ಕ್ ಸಮಸ್ಯೆಗೆ ಗ್ರಾಹಕರು ಹೈರಾಣು

ಬೆಳ್ತಂಗಡಿ : ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ನೆಟ್ ವರ್ಕ್ ಸಮಸ್ಯೆ ಎದುರಾಗಿದ್ದು ಸಾರ್ವಜನಿಕರು ಹೈರಾಣಗಿದ್ದಾರೆ.

ಇಲ್ಲಿನ ಇಂದಬೆಟ್ಟು ಗ್ರಾಮದ ಬಂಗಾಡಿ, ಬಂದಾರು, ಮೊಗ್ರು ಹಾಗೂ ಮೈರೋಲ್ತಡ್ಕ ಗ್ರಾಮಗಳಲ್ಲೂ ನೆಟ್ ವರ್ಕ್ ಸಮಸ್ಯೆ ಉಂಟಾಗಿದ್ದು ಆನ್‌ಲೈನ್ ಕೆಲಸಗಳನ್ನು ಮಾಡುವುದಕ್ಕೆ ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.

ಈ ಗ್ರಾಮಗಳಲ್ಲಿ ಏರ್ಟೆಲ್ ಹಾಗೂ ಬಿಇಎಸ್‌ಎನ್‌ಎಲ್ ಟವರ್‌ಗಳ ವ್ಯವಸ್ಥೆಗಳು ಇದ್ದರೂ ನೆಟ್ ವರ್ಕ್ ಗಳು, ಸಿಗುತ್ತಿಲ್ಲ.

ಹೀಗಾಗಿ ಸರಕಾರಿ ಕಚೇರಿಗಳ ಕೆಲಸ , ಮನೆಯಲ್ಲಿಯೇ ಕೂತು ಕಚೇರಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ. ಇದರಿಂದಾಗಿ ನೆಟ್‌ವರ್ಕ್ ಸಮಸ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಮಾಡುವುದಕ್ಕೆ ಜನ ಮುಂದಾಗಿದ್ದಾರೆ.

ಈ ವಿಚಾರದಲ್ಲಿ ಸಂಬಂಧಪಟ್ಟ ಕಂಪನಿಗಳು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ ಎಂದು ಗ್ರಾಹಕರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *