Breaking
19 Sep 2026, Sat

ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ, ಯುವಕನಿಗೆ ಸ್ಥಳೀಯರಿಂದ ಧರ್ಮದೇಟು

ಬಂಟ್ವಾಳ : ಯುವತಿಯೊಬ್ಬಳನ್ನು ಪಟಾಯಿಸಲು ಹೋಗಿ ಸಿಕ್ಕಿಹಾಕಿಕೊಂಡ ಅನ್ಯ ಕೋಮಿನ ಯುವಕನೊಬ್ಬ ಏಟು ತಿಂದ ಘಟನೆ ಕನ್ಯಾನ ಗ್ರಾಮದ ಕುಡ್ತಮುಗೇರಿನಲ್ಲಿ ನಡೆದಿದೆ. ನಡುರಾತ್ರಿ ನಗ್ನ ವಿಡಿಯೋ ಕರೆಗೆ ಒತ್ತಾಯಿಸಿದ್ದಲ್ಲದೆ, ಚಾಕೊಲೇಟ್ ಹಾಗೂ ಐಸ್​​ಕ್ರೀಂ ತೆಗೆದುಕೊಂಡು ಯುವತಿಯನ್ನು ಭೇಟಿಯಾಗಲೆಂದು ಹೋಗಿದ್ದ ಯುವಕನಿಗೆ ಶಾಕ್ ಕಾದಿತ್ತು.

ಅಷ್ಟಕ್ಕೂ, ಯುವತಿ ಎಂದು ಭಾವಿಸಿ ಆ ಯುವಕ ಚಾಟ್ ಮಾಡಿದ್ದು ಹಾಗೂ ವಿಡಿಯೋ ಕರೆಗೆ ಒತ್ತಾಯಿಸಿದ್ದು ಮತ್ತೊಬ್ಬ ಯುವಕನೊಂದಿಗೆ.

ಕನ್ಯಾನದ ಪಂಜಾಜೆ ನಿವಾಸಿ ಸವಾದ್(20) ಎಂಬಾತ ಬೆಂಗಳೂರಿನಲ್ಲಿ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ಸಂದರ್ಭದಲ್ಲಿ ವಿಟ್ಲದ ಕಚೇರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯ ನೋಡಿ ಮರುಳಾಗಿದ್ದಾನೆ. ಗೂಗಲ್ ಪೇ ಮೂಲಕ ಉಪಾಯದಿಂದ ಯುವತಿಯ ನಂಬರ್ ಪಡೆಯಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಕಚೇರಿಯ ಸಹೋದ್ಯೋಗಿಯ ನಂಬರ್ ನೀಡಿದ್ದ ಯುವತಿ ಆತನನ್ನು ಸಾಗ ಹಾಕಿದ್ದರು. ಆದರೆ, ಅದು ಆ ಯುವತಿಯದ್ದೇ ಫೋನ್ ನಂಬರ್ ಎಂದು ಭಾವಿಸಿದ್ದ ಸವಾದ್ ನಿರಂತರ ಮೆಸೇಜ್ ಮಾಡಲು ಆರಂಭಿಸಿದ್ದ. ಆತನ ಎಲ್ಲ ಮೆಸೇಜ್​​ಗಳಿಗೂ ಆ ಯುವತಿಯ ಸಹೋದ್ಯೋಗಿ ಯುವಕ ಉತ್ತರಿಸಿ ಆಟವಾಡಿಸಿದ್ದ.

ಇದಾದ ನಂತರ ಸವಾದ್ ತಡರಾತ್ರಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸಲು ಆರಂಭಿಸಿದ್ದ. ಅಂಗಾಂಗ ತೋರಿಸು ಎಂದು ವಾಯ್ಸ್ ಮೆಸೇಜ್ ಕಳುಹಿಸಿದ್ದ. ನಂತರ ಭೇಟಿಯಾಗುವಂತೆ ಮಸೇಜ್ ಮೂಲಕ ಒತ್ತಾಯಿಸಿದ್ದ. ಇದಕ್ಕೆ ಯುವತಿ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ ಯುವಕ ಒಪ್ಪಿದ್ದ. ಹೀಗಾಗಿ ಸವಾದ್, ಯುವತಿಗೆಂದು ಐಸ್ ಕ್ರೀಂ, ಚಾಕೊಲೇಟ್ ತೆಗೆದುಕೊಂಡು ತೆರಳಿದ್ದ. ಆತನಿಗಾಗಿ ಕಾದು ಕುಳಿತಿದ್ದ ಸ್ಥಳೀಯ ಯುವಕರು, ಸರಿಯಾಗಿ ಏಟು ಕೊಟ್ಟು ತದುಕಿದ್ದಾರೆ. ನಂತರ ಆತನನ್ನು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *