Breaking
19 Sep 2026, Sat

ಅಮ್ಟಾಡಿ ಯುವಕನ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ : ಅಮ್ಟಾಡಿ ತನಿಯಮನೆ ನಿವಾಸಿ ಜೀವನ್ ತಾವ್ರೊ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಕುರಿಯಾಳ ಮೂಲದ ಪ್ರವೀಣ್ ಡೆಸಾ ಮತ್ತು ರೋಹನ್ ಪಿಂಟೊ ಬಂಧಿತರು.


ಅಮ್ಟಾಡಿ ತನಿಯ ಮನೆ ನಿವಾಸಿ ಕೃಷಿಕ ಮ್ಯಾಕ್ಸಿನ್‌ ತಾವ್ರೋ ಅವರ ಪುತ್ರ ಜೀವನ್‌ ತಾವ್ರೋ ಅವರು ಕೃಷಿ ಕೆಲಸ ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿ, ಆದಾಯಗಳಿಸುತ್ತಿದ್ದರು. ಆದರೆ ಸುಮಾರು ಒಂದು ವರ್ಷದಿಂದ ರೋಹನ್‌ ಪಿಂಟೋ, ಪ್ರವೀಣ್‌ ಡೇಸಾ, ಸಂತೋಷ್‌ ರವರು ಜೀವನ್‌ ತಾವ್ರೋ ಅವರ ಮೇಲೆ ಇಲ್ಲದ-ಸಲ್ಲದ ಆರೋಪ ಮಾಡಿ ಸುಮಾರು 60 ಲಕ್ಷ ರೂ. ಹಣವನ್ನು ಹಂತಹಂತವಾಗಿ ಪಡೆದಿದ್ದಲ್ಲದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ದಿಕ್ಕುತೋಚದಾದ ಜೀವನ್‌ ತಾವ್ರೋ ಅವರು ಫೆ.10ರಂದು ಡೆತ್‌ ನೋಟ್‌ ಬರೆದಿಟ್ಟು ತಮ್ಮ ಮನೆಯ ಕೋಣೆಯ ಒಳಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ನಿನ್ನೆ ಬಂಧಿಸಲಾಗಿದೆ.

Leave a Reply

Your email address will not be published. Required fields are marked *