Breaking
19 Sep 2026, Sat

ತಾಂತ್ರಿಕ ದೋಷದಿಂದ ಡಿವೈಡರ್‌ ಏರಿದ ಕೆ.ಎಸ್.ಆರ್.ಟಿ.ಸಿ ಬಸ್

ಮಂಗಳೂರು: ತಾಂತ್ರಿಕ ದೋಷದಿಂದ ಸರಕಾರಿ ಬಸ್ಸೊಂದು ರಸ್ತೆ ವಿಭಜಕದ ಮೇಲೇರಿದ ಘಟನೆ ಏ.07ರಂದು ನಗರದ ಹೊರ ವಲಯದ ಅರ್ಕುಳ ವಳಚ್ಚಿಲ್ ನಲ್ಲಿ ನಡೆದಿದೆ.

ಬಸ್ ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿನ ಬ್ರೇಕ್ ಚೇಂಬರ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಡಿವೈಡರ್ ಮೇಲೆ ಹತ್ತಿದೆ.

ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಸುಮಾರು 20 ಮಂದಿ ಪ್ರಯಾಣಿಕರಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *