Breaking
28 Jul 2026, Tue

ಬಂಟ್ವಾಳ ತಾಲೂಕು ವಕೀಲರ ಸಂಘದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಮಿಲನ ಕಾರ್ಯಕ್ರಮ ಏ.07ರಂದು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಬಂಟ್ವಾಳ: ತಾಲೂಕು ವಕೀಲರ ಸಂಘದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಮಿಲನ ಕಾರ್ಯಕ್ರಮ ಏ.07ರಂದು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಅಮೃತ ಎಸ್.ರಾವ್ ಅವರು, ಕೆಲಸದ ಮೇಲೆ ಪ್ರೀತಿಯಿಟ್ಟು ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಎಂ. ಅವರು, ವಕೀಲರ ಸಂಘದ ಶ್ರೇಯೋಭಿವೃದ್ದಿಗಾಗಿ ಸಮಯವನ್ನು ‌ಮೀಸಲಿಟ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ವಕೀಲ ವೃತ್ತಿ‌ಜೀವನದ ನಿವೃತ್ತಿಯನ್ನು ಪಡೆದ ನ್ಯಾಯವಾದಿ ಜತ್ತನಕೋಡಿ ಶಂಕರ್ ಭಟ್ ಅವರನ್ನು ಸನ್ಮಾನಿಸಲಾಯಿತು.
ಈ ಸಂರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್ ಸಿ ಭಾಗ್ಯಮ್ಮ , ಬಂಟ್ವಾಳ ಕೃಷ್ಣಮೂರ್ತಿ ಎನ್, ನಿವೃತ್ತ ನ್ಯಾಯಾಧೀಶ ಎನ್. ಶ್ರೀವತ್ಸ ಕೆದಿಲಾಯ, ಹೆಚ್ಚುವರಿ ಸಿವಿಲ್ ಜಡ್ಹ್, ಮತ್ತು ಜೆ.ಎಮ್.ಎಪ್ ಸಿ, ನಿವೃತ್ತ ನ್ಯಾಯಾಧೀಶ ಕೆ.ರಾಧಾಕೃಷ್ಣ , ನಿವೃತ್ತ ನ್ಯಾಯಾಧೀಶ ಹಾಗೂ ಹಿರಿಯ ನ್ಯಾಯವಾದಿ ಬಿ.ಗಣೇಶಾನಂದ ಎನ್.ಸೋಮಯಾಜಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ವಕೀಲರ ಸೌಹಾರ್ದ ಸಹಕಾರಿ ಸಂಘ (ರಿ) ಮಂಗಳೂರು ಅಧ್ಯಕ್ಷ ವಿನಯ ಕುಮಾರ್ ಉಪಸ್ಥಿತರಿದ್ದರು.

ಹಿರಿಯ ನ್ಯಾಯವಾದಿ ಜಯರಾಮ ರೈ ಸ್ವಾಗತಿಸಿ, ಸಂಘದ ‌ಕಾರ್ಯದರ್ಶಿ ಚಂದ್ರಶೇಖರ್ ಬೈರಿಕಟ್ಟೆ ವಾರ್ಷಿಕ ವರದಿ ವಾಚಿಸಿದರು. ಅಭಿನಯ ಚಿದಾನಂದ ವಂದಿಸಿ ವಕೀಲರಾದ ನಿತಿನ್ ಹಾಗೂ ಅಭಿನಯ ಚಿದಾನಂದ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *